ಗಲಾತ್ಯದವರಿಗೆ
ಗ್ರಂಥಕರ್ತೃತ್ವ
ಅಪೊಸ್ತಲನಾದ ಪೌಲನು ಈ ಪತ್ರಿಕೆಯ ಗ್ರಂಥಕರ್ತನಾಗಿದ್ದಾನೆ, ಇದು ಆದಿ ಸಭೆಯ ಒಮ್ಮತದ ಅಭಿಮತವಾಗಿದೆ. ಪೌಲನು ಆಸ್ಯ ಸೀಮೆಗೆ ಹೋದ ತನ್ನ ಮೊದಲನೆಯ ಮಿಷನರಿ ಪ್ರಯಾಣದಲ್ಲಿ ಅವರಲ್ಲಿ ಸಭೆಗಳನ್ನು ಪ್ರಾರಂಭಿಸಿದ ನಂತರ ದಕ್ಷಿಣ ಗಲಾತ್ಯ ಸಭೆಗಳಿಗೆ ಇದನ್ನು ಬರೆದನು. ಗಲಾತ್ಯವು ರೋಮಾಪುರ ಅಥವಾ ಕೊರಿಂಥದಂತೆ ಒಂದು ಪಟ್ಟಣವಲ್ಲ, ಆದರೆ ಅನೇಕ ಪಟ್ಟಣಗಳು ಮತ್ತು ಹಲವಾರು ಸಭೆಗಳು ಇರುವ ರೋಮನ್ ಪ್ರಾಂತ್ಯವಾಗಿದೆ. ಪತ್ರಿಕೆಯಲ್ಲಿ ಗಲಾತ್ಯದವರು ಎಂದು ಸಂಬೋಧಿಸಿ ಹೇಳಿರುವಂಥವರು ಪೌಲನಿಂದ ರಕ್ಷಣೆಗೆ ಬಂದಂಥವರಾಗಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 48 ರಲ್ಲಿ ಬರೆಯಲ್ಪಟ್ಟಿದೆ.
ಬಹುಶಃ ಪೌಲನು ಅಂತಿಯೋಕ್ಯದಿಂದ ಗಲಾತ್ಯದವರಿಗೆ ಈ ಪತ್ರಿಕೆಯನ್ನು ಬರೆದಿರಬಹುದು, ಏಕೆಂದರೆ ಇದು ಅವನ ನೆಲೆಬೀಡಾಗಿತ್ತು.
ಸ್ವೀಕೃತದಾರರು
ಗಲಾತ್ಯದವರಿಗೆ ಬರೆದ ಪತ್ರಿಕೆಯನ್ನು ಗಲಾತ್ಯದಲ್ಲಿರುವ ಸಭೆಗಳ ಸದಸ್ಯರಿಗೆ ಬರೆಯಲಾಗಿತ್ತು (ಗಲಾ. 1:1-2).
ಉದ್ದೇಶ
ಯೆಹೂದ್ಯರ ಸುಳ್ಳು ಸುವಾರ್ತೆಯನ್ನು ಅಂದರೆ ಯೆಹೂದ್ಯ ಕ್ರೈಸ್ತರು ರಕ್ಷಣೆಗಾಗಿ ಸುನ್ನತಿಯು ಅಗತ್ಯವಿದೆ ಎಂದು ಹೇಳುತ್ತಿದ್ದ ಸುವಾರ್ತೆಯನ್ನು ಖಂಡಿಸುವುದು ಮತ್ತು ಅವರ ರಕ್ಷಣೆಗೆ ಬೇಕಾದ ನಿಜವಾದ ಆಧಾರವನ್ನು ಗಲಾತ್ಯದವರಿಗೆ ನೆನಪಿಸುವುದು ಈ ಪತ್ರಿಕೆಯ ಉದ್ದೇಶವಾಗಿತ್ತು. ಪೌಲನು ತನ್ನ ಅಪೊಸ್ತಲ ಅಧಿಕಾರವನ್ನು ಸ್ಪಷ್ಟವಾಗಿ ಸ್ಥಾಪಿಸಿ ಪ್ರತಿಕ್ರಿಯಿಸಿದನು ಮತ್ತು ಅದರಿಂದ ಅವನು ಸಾರಿದ ಸುವಾರ್ತೆಯನ್ನು ಪುಷ್ಟೀಕರಿಸಿದನು. ನಂಬಿಕೆಯ ಮೂಲಕ ಕೃಪೆಯಿಂದ ಮಾತ್ರವೇ ಜನರು ನೀತಿಕರಿಸಲ್ಪಟ್ಟಿದ್ದಾರೆ ಮತ್ತು ಅವರು ತಮ್ಮ ಹೊಸ ಜೀವನವನ್ನು ಆತ್ಮನ ಸ್ವಾತಂತ್ರ್ಯದಲ್ಲಿ ನಂಬಿಕೆಯಿಂದ ಮಾತ್ರವೇ ಜೀವಿಸಬೇಕು.
ಮುಖ್ಯಾಂಶ
ಕ್ರಿಸ್ತನಲ್ಲಿರುವ ಸ್ವಾತಂತ್ರ್ಯ
ಪರಿವಿಡಿ
1. ಪೀಠಿಕೆ — 1:1-10
2. ಸುವಾರ್ತೆಯ ದೃಢೀಕರಣ — 1:11-2:21
3. ನಂಬಿಕೆಯಿಂದ ನೀತಿಕರಣ — 3:1-4:31
4. ನಂಬಿಕೆಯ ಮತ್ತು ಸ್ವಾತಂತ್ರ್ಯ ಜೀವನದ ಅಭ್ಯಾಸ — 5:1-6:18