ಲೂಕನು
ಗ್ರಂಥಕರ್ತೃತ್ವ
ವೈದ್ಯನಾದ ಲೂಕನು ಇದರ ಗ್ರಂಥಕರ್ತನಾಗಿದ್ದಾನೆ ಎಂಬುದು ಪ್ರಾಚೀನ ಬರಹಗಾರರ ಏಕರೀತಿಯ ನಂಬಿಕೆಯಾಗಿದೆ ಮತ್ತು ಅವನ ಬರವಣಿಗೆಯಿಂದ, ಅವನು ಎರಡನೆಯ ತಲೆಮಾರಿನ ಕ್ರೈಸ್ತನಾಗಿದ್ದಾನೆ ಎಂದು ತೋರಿಬರುತ್ತದೆ. ಸಾಂಪ್ರದಾಯಿಕವಾಗಿ ಅವನನ್ನು ಅನ್ಯಜನಾಂಗದವನು ಎಂದು ಪರಿಗಣಿಸಲಾಗಿದೆ, ಅವನು ಪ್ರಧಾನವಾಗಿ ಸುವಾರ್ತಿಕನಾಗಿದ್ದನು, ಲೂಕನ ಸುವಾರ್ತೆಯನ್ನು ಮತ್ತು ಅಪೊಸ್ತಲರ ಕೃತ್ಯಗಳ ಪುಸ್ತಕವನ್ನು ಬರೆದನು, ಮಿಷನರಿ ಕಾರ್ಯದಲ್ಲಿ ಪೌಲನೊಂದಿಗೆ ಸಂಚರಿಸಿದನು (ಕೊಲೊ 4:14; 2 ತಿಮೊ. 4:11; ಫಿಲೆ. 24).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60-80 ರ ನಡುವೆ ಬರೆಯಲ್ಪಟ್ಟಿದೆ.
ಲೂಕನು ತನ್ನ ಬರಹವನ್ನು ಕೈಸರೈಯದಲ್ಲಿ ಆರಂಭಿಸಿ ರೋಮ್ನಲ್ಲಿ ಮುಗಿಸಿದನು. ಬರವಣಿಗೆಯ ಪ್ರಮುಖ ಸ್ಥಳಗಳು ಬೇತ್ಲೆಹೇಮ್, ಗಲಿಲಾಯ, ಯೂದಾಯ ಮತ್ತು ಯೆರೂಸಲೇಮ್ ಆಗಿರಬಹುದು.
ಸ್ವೀಕೃತದಾರರು
ಲೂಕನ ಪುಸ್ತಕವು ಥೆಯೊಫಿಲನಿಗೆ ಸಮರ್ಪಿತವಾಗಿದೆ, ದೇವರನ್ನು ಪ್ರೀತಿಸುವವನು ಎಂಬುದು ಅವನ ಹೆಸರಿನ ಅರ್ಥ, ಅವನು ಈಗಾಗಲೇ ಕ್ರೈಸ್ತನಾಗಿದ್ದನೋ ಅಥವಾ ಅವನು ಕ್ರೈಸ್ತನಾಗಬೇಕೆಂದು ಬಯಸುವವನಾಗಿದ್ದನೋ ಎಂಬುದು ಅಸ್ಪಷ್ಟವಾಗಿದೆ. ಲೂಕನು ಅವನನ್ನು ಸನ್ಮಾನ್ಯ ಎಂದು ಸಂಬೋಧಿಸುವ ಅಂಶವು (ಲೂಕ 1:3) ಅವನು ರೋಮನ್ ಅಧಿಕಾರಿಯೆಂದು ಸೂಚಿಸುತ್ತದೆ, ಪುಸ್ತಕದ ಹಲವಾರು ಸಾಲುಗಳು ಅನ್ಯಜನರ ವಾಚಕರ ಬಗ್ಗೆ ಸೂಚಿಸುತ್ತದೆ ಮತ್ತು ಅವನು ಪ್ರಮುಖವಾಗಿ ಮನುಷ್ಯಕುಮಾರನು ಮತ್ತು ದೇವರ ರಾಜ್ಯ ಎಂಬ ಪದಗುಚ್ಛಗಳ ಮೇಲೆ ಗಮನ ಹರಿಸಿದ್ದಾನೆ (ಲೂಕ 5:24; 19:10; 17:20-21; 13:18).
ಉದ್ದೇಶ
ಯೇಸುವಿನ ಜೀವನದ ಕುರಿತಾದ ವಿವರಣೆ, ಲೂಕನು ಯೇಸುವನ್ನು ಮನುಷ್ಯಕುಮಾರನೆಂದು ಪ್ರಸ್ತುತಪಡಿಸುತ್ತಾನೆ, ಥೆಯೊಫಿಲನಿಗೆ ಉಪದೇಶಿಸಿದ ವಿಷಯಗಳ ಪರಿಪೂರ್ಣ ತಿಳುವಳಿಕೆಯನ್ನು ಹೊಂದಿಕೊಳ್ಳುವಂತೆ ಲೂಕನು ಇದನ್ನು ಅವನಿಗೆ ಬರೆದನು (ಲೂಕ 1:4). ಯೇಸುವಿನ ಹಿಂಬಾಲಕರ ಕುರಿತು ವಿಧ್ವಂಸಕತೆಯಾಗಲಿ ಅಥವಾ ನೀಚತನವಾಗಲಿ ಯಾವುದು ಇಲ್ಲವೆಂದು ಅವನಿಗೆ ತೋರಿಸುವುದಕ್ಕಾಗಿ ಹಿಂಸೆಯ ಸಮಯದಲ್ಲಿ ಲೂಕನು ಕ್ರೈಸ್ತತ್ವದ ಸಮರ್ಥನೆಗಾಗಿ ಇದನ್ನು ಬರೆದನು.
ಮುಖ್ಯಾಂಶ
ಯೇಸು - ಪರಿಪೂರ್ಣ ಮನುಷ್ಯನು
ಪರಿವಿಡಿ
1. ಯೇಸುವಿನ ಜನನ ಮತ್ತು ಆರಂಭಿಕ ಜೀವನ — 1:5-2:52
2. ಯೇಸುವಿನ ಸೇವೆಯ ಆರಂಭ — 3:1-4:13
3. ಯೇಸು ರಕ್ಷಣೆಯ ಕರ್ತನು — 4:14-9:50
4. ಯೇಸು ಶಿಲುಬೆಯ ಕಡೆಗೆ ಸಾಗುತ್ತಿರುವುದು — 9:51-19:27
5. ಯೇಸು ಜಯಕಾರದೊಂದಿಗೆ ಯೆರೂಸಲೇಮಿಗೆ ಪ್ರವೇಶಿಸಿದ್ದು, ಶಿಲುಬೆಗೇರಿಸುವಿಕೆ ಮತ್ತು ಪುನರುತ್ಥಾನ — 19:28-24:53