ಮತ್ತಾಯನು
ಗ್ರಂಥಕರ್ತೃತ್ವ
ಈ ಪುಸ್ತಕದ ಗ್ರಂಥಕರ್ತನು ಮತ್ತಾಯನು, ಅವನು ಸುಂಕ ವಸೂಲಿಗಾರನಾಗಿದ್ದನು, ಯೇಸುವನ್ನು ಹಿಂಬಾಲಿಸಲು ತನ್ನ ಕೆಲಸ ಬಿಟ್ಟಂಥವನಾಗಿದ್ದನು (9:9,13). ಮಾರ್ಕನು ಮತ್ತು ಲೂಕನು ತಮ್ಮ ಪುಸ್ತಕಗಳಲ್ಲಿ ಅವನನ್ನು ಲೇವಿ ಎಂದು ಉಲ್ಲೇಖಿಸುತ್ತಾರೆ. ಕರ್ತನ ದಾನ ಎಂಬುದು ಅವನ ಹೆಸರಿನ ಅರ್ಥ, ಆರಂಭಿಕ ಸಭೆಯ ಪಾದ್ರಿಗಳು 12 ಮಂದಿ ಅಪೊಸ್ತಲರಲ್ಲಿ ಒಬ್ಬನಾದ ಮತ್ತಾಯನನ್ನು ಈ ಪುಸ್ತಕದ ಗ್ರಂಥಕರ್ತನೆಂದು ಒಮ್ಮತವಾಗಿ ಒಪ್ಪಿಕೊಂಡಿದ್ದಾರೆ. ಮತ್ತಾಯನು ಯೇಸುವಿನ ಸೇವೆಯಲ್ಲಿ ನಡೆದ ಘಟನೆಗಳ ಪ್ರತ್ಯಕ್ಷದರ್ಶಿಯಾಗಿದ್ದಾನೆ. ಇತರ ಸುವಾರ್ತೆಯ ಕಥನದೊಂದಿಗೆ ಮತ್ತಾಯನ ಸುವಾರ್ತೆಯ ತುಲನಾತ್ಮಕ ಅಧ್ಯಯನವು ಕ್ರಿಸ್ತನ ಅಪೊಸ್ತಲಿಕ ಸಾಕ್ಷಿಯು ವಿಂಗಡಿಸಲ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 50-70 ರ ನಡುವೆ ಬರೆಯಲ್ಪಟ್ಟಿದೆ.
ಮತ್ತಾಯ ಸುವಾರ್ತೆಯ ಯೆಹೂದ್ಯ ಲಕ್ಷಣವನ್ನು ಪರಿಗಣಿಸುವುದಾದರೆ, ಅದು ಪ್ಯಾಲೆಸ್ಟೈನ್ ಅಥವಾ ಸಿರಿಯಾದಲ್ಲಿ ಬರೆಯಲ್ಪಟ್ಟಿರಬಹುದು, ಅಂತಿಯೋಕ್ಯದಲ್ಲಿ ಬರೆಯಲು ಪ್ರಾರಂಭವಾಗಿರಬಹುದು ಎಂದು ಅನೇಕರು ಭಾವಿಸುತ್ತಾರೆ.
ಸ್ವೀಕೃತದಾರರು
ಆತನ ಸುವಾರ್ತೆಯು ಗ್ರೀಕ್ನಲ್ಲಿ ಬರೆದಿರುವ ಕಾರಣ, ಮತ್ತಾಯನು ಗ್ರೀಕ್ ಭಾಷಿಕರಾದ ಯೆಹೂದ್ಯ ಸಮುದಾಯದಿಂದ ಬಂದಂಥ ಓದುಗರ ಕಡೆಗೆ ಒಲವನ್ನು ತೋರಿರಬಹುದು. ಅನೇಕ ಅಂಶಗಳು ಯೆಹೂದ್ಯ ಓದುಗರ ಬಗ್ಗೆ ಸೂಚಿಸುತ್ತವೆ: ಹಳೇ ಒಡಂಬಡಿಕೆಯ ವಿಷಯಗಳ ನೆರವೇರಿಕೆಯು ಮತ್ತಾಯನ ಆಸಕ್ತಿಯ ವಿಷಯವಾಗಿತ್ತು; ಅಬ್ರಹಾಮನಿಂದ ಯೇಸುವಿನವರೆಗೆ ಇರುವ ವಂಶಾವಳಿಯ ರಚನೆ (1:1-17); ಯೆಹೂದ್ಯ ಪರಿಭಾಷೆಯ ಬಳಕೆ (ಉದಾಹರಣೆಗೆ, ಪರಲೋಕ ರಾಜ್ಯ, ಪರಲೋಕವು ದೇವರ ನಾಮವನ್ನು ಉಪಯೋಗಿಸುವುದಕ್ಕಿರುವ ಯೆಹೂದ್ಯರ ಅನಿಚ್ಛೆಯನ್ನು ಬಹಿರಂಗಪಡಿಸುತ್ತದೆ ಮತ್ತು ಯೇಸುವನ್ನು ದಾವೀದ ಕುಮಾರನೆಂದು ಒತ್ತಿಹೇಳುತ್ತಿರುವುದು, 1:1; 9:27; 12:23; 15:22; 30:31; 21:9,15; 22:41,45). ಮತ್ತಾಯನು ಯೆಹೂದ್ಯ ಸಮುದಾಯದ ಕಡೆಗೆ ಕೇಂದ್ರೀಕರಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಉದ್ದೇಶ
ಈ ಸುವಾರ್ತೆಯನ್ನು ಬರೆಯುವಾಗ, ಯೇಸು ಮೆಸ್ಸೀಯನೆಂದು ಯೆಹೂದ್ಯ ಓದುಗರಿಗೆ ದೃಢೀಪಡಿಸುವುದು ಮತ್ತಾಯನ ಉದ್ದೇಶವಾಗಿತ್ತು. ದೇವರ ರಾಜ್ಯವನ್ನು ಮಾನವಕುಲದೆಡೆಗೆ ತರುವುದನ್ನು ದೃಢಪಡಿಸುವುದು ಇದರಲ್ಲಿನ ಉದ್ದೇಶವಾಗಿದೆ. ಯೇಸು ಹಳೆಯ ಒಡಂಬಡಿಕೆಯ ಪ್ರವಾದನೆಯನ್ನು ಮತ್ತು ನಿರೀಕ್ಷೆಗಳನ್ನು ನೆರವೇರಿಸುವ ಅರಸನೆಂದು ಅವನು ಒತ್ತಿಹೇಳುತ್ತಿದ್ದಾನೆ (ಮತ್ತಾ 1:1; 16:16; 20:28).
ಮುಖ್ಯಾಂಶ
ಯೇಸು ಯೆಹೂದ್ಯರ ಅರಸನು
ಪರಿವಿಡಿ
1. ಯೇಸುವಿನ ಜನನ — 1:1-2:23
2. ಗಲಿಲಾಯದಲ್ಲಿನ ಯೇಸುವಿನ ಸೇವೆ — 3:1-18:35
3. ಯೂದಾಯದಲ್ಲಿನ ಯೇಸುವಿನ ಸೇವೆ — 19:1-20:34
4. ಯೂದಾಯದಲ್ಲಿನ ಕಡೆಯ ದಿನಗಳು — 21:1-27:66
5. ಸಮಾಪ್ತಿಯ ಸಂಗತಿಗಳು — 28:1-20