ಪ್ರಕಟಣೆ
ಗ್ರಂಥಕರ್ತೃತ್ವ
ಕರ್ತನು ದೇವದೂತನ ಮೂಲಕ ಹೇಳಿರುವಂಥದ್ದನು ಬರೆದಿರುವವನು ನಾನೇ ಎಂದು ಅಪೊಸ್ತಲನಾದ ಯೋಹಾನನು ತನ್ನನ್ನು ಹೆಸರಿಸಿಕೊಳ್ಳುತ್ತಾನೆ. ಆದಿಸಭೆಯ ಆರಂಭಿಕ ಬರಹಗಾರರಾದ ಜಸ್ಟಿನ್ ಮಾರ್ಟಿರ್, ಐರೆನಿಯಸ್, ಹಿಪ್ಪೊಲೈಟಸ್, ಟೆರ್ಟುಲಿಯನ್, ಅಲೆಕ್ಸಾಂಡ್ರಿಯಾದ ಕ್ಲೆಮೆಂಟ್ ಮತ್ತು ಮ್ಯುರಿಟೋರಿಯನ್ ಎಂಬವರೆಲ್ಲರು ಅಪೊಸ್ತಲನಾದ ಯೋಹಾನನು ಪ್ರಕಟಣೆಯ ಪುಸ್ತಕದ ಗ್ರಂಥಕರ್ತನಾಗಿದ್ದಾನೆಂದು ನಂಬುತ್ತಾರೆ. ಪ್ರಕಟಣೆಯನ್ನು ಹಿಂಸೆಯಲ್ಲಿರುವವರಿಗೆ ನಿರೀಕ್ಷೆಯನ್ನು (ದೇವರ ಅಂತಿಮ ವಿಜಯದಲ್ಲಿ) ಶ್ರುತಪಡಿಸಲು, ಸಾಂಕೇತಿಕ ಅಲಂಕಾರವನ್ನು ಬಳಸುವ ಒಂದು ರೀತಿಯ ಯೆಹೂದ್ಯ ಸಾಹಿತ್ಯವಾದ ‘ಅಪೋಕ್ಯಾಲಿಪ್ಟಿಕ್’ (ಭವಿಷ್ಯದ್ದರ್ಶನ) ರೂಪದಲ್ಲಿ ಬರೆಯಲಾಗಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 95-96 ರ ನಡುವೆ ಬರೆಯಲ್ಪಟ್ಟಿದೆ.
ಯೋಹಾನನು ಈ ಪ್ರವಾದನೆಯನ್ನು ಪಡೆದುಕೊಂಡಾಗ ಏಜಿಯನ್ ಸಮುದ್ರದ ದ್ವೀಪವಾದ ಪತ್ಮೊಸ್ ದ್ವೀಪದಲ್ಲಿದ್ದನು ಎಂದು ಅವನು ಸೂಚಿಸುತ್ತಾನೆ (1:9).
ಸ್ವೀಕೃತದಾರರು
ಈ ಪ್ರವಾದನೆಯನ್ನು ಆಸ್ಯ ಸೀಮೆಯಲ್ಲಿರುವ ಏಳು ಸಭೆಗಳಿಗೆ ನಿರ್ದೇಶಿಸಲಾಗಿದೆ ಎಂದು ಯೋಹಾನನು ಹೇಳುತ್ತಾನೆ (1:4).
ಉದ್ದೇಶ
ಯೇಸು ಕ್ರಿಸ್ತನನ್ನು (1:1), ಆತನ ವ್ಯಕ್ತಿತ್ವವನ್ನು, ಆತನ ಶಕ್ತಿಯನ್ನು ಪ್ರಕಟಿಸುವುದು ಮತ್ತು ಶೀಘ್ರದಲ್ಲೇ ಏನು ಸಂಭವಿಸುತ್ತದೆಂದು ಆತನ ಸೇವಕರಿಗೆ ಪ್ರಕಟಿಸುವುದು ಪ್ರಕಟಣೆಯ ಉದ್ದೇಶವಾಗಿದೆ. ಇದು ಲೋಕವು ಖಂಡಿತವಾಗಿ ನಾಶವಾಗುತ್ತದೆ ಮತ್ತು ನ್ಯಾಯತೀರ್ಪು ಖಚಿತವಾಗಿಯೂ ಇದೆ ಎಂಬ ಅಂತಿಮ ಎಚ್ಚರಿಕೆಯಾಗಿದೆ. ಇದು ನಮಗೆ ಪರಲೋಕದ ಮತ್ತು ತಮ್ಮ ನಿಲುವಂಗಿಯನ್ನು ಶುಭ್ರವಾಗಿಟ್ಟುಕೊಂಡಿರುವವರಿಗಾಗಿ ಕಾಯುತ್ತಿರುವ ಸಕಲ ಮಹಿಮೆಗಳ ಮಿನುಗುನೋಟವನ್ನು ತೋರಿಸುತ್ತದೆ. ಪ್ರಕಟಣೆಯು ಮಹಾ ಉಪದ್ರವದ ಸಕಲ ಸಂಕಟಗಳಿಂದ ಹಿಡಿದು ಅವಿಶ್ವಾಸಿಗಳೆಲ್ಲರೂ ನಿತ್ಯವಾಗಿ ಅನುಭವಿಸುವಂಥ ಅಂತಿಮ ಬೆಂಕಿಯವರೆಗಿರುವ ವಿಷಯಗಳನ್ನು ನಮಗೆ ವಿವರಿಸುತ್ತದೆ. ಈ ಪುಸ್ತಕವು ಸೈತಾನನ ಪತನವನ್ನು ಮತ್ತು ಅವನು ಹಾಗೂ ಅವನ ದೂತರು ಹೊಂದತಕ್ಕ ದಂಡನೆಯನ್ನು ಪುನರುಚ್ಚರಿಸುತ್ತದೆ.
ಮುಖ್ಯಾಂಶ
ಅನಾವರಣ
ಪರಿವಿಡಿ
1. ಕ್ರಿಸ್ತನ ಪ್ರಕಟನೆ ಮತ್ತು ಯೇಸುವಿನ ಸಾಕ್ಷಿ — 1:1-8
2. ನೀನು ನೋಡಿದಂಥ ವಿಷಯಗಳು — 1:9-20
3. ಏಳು ಸ್ಥಳೀಯ ಸಭೆಗಳು — 2:1-3:22
4. ಮುಂದೆ ಸಂಭವಿಸಲಿರುವ ವಿಷಯಗಳು — 4:1-22:5
5. ಕರ್ತನ ಅಂತಿಮ ಎಚ್ಚರಿಕೆ ಮತ್ತು ಅಪೊಸ್ತಲನ ಅಂತಿಮ ಪ್ರಾರ್ಥನೆ — 22:6-21