3 ಯೋಹಾನನು
ಗ್ರಂಥಕರ್ತೃತ್ವ
ಯೋಹಾನನ ಮೂರು ಪತ್ರಿಕೆಗಳು ಖಂಡಿತವಾಗಿ ಒಬ್ಬ ಮನುಷ್ಯನ ಕೃತಿಯಾಗಿವೆ ಮತ್ತು ಬಹುತೇಕ ಪಂಡಿತರು ಇದು ಅಪೊಸ್ತಲನಾದ ಯೋಹಾನನದು ಎಂದು ನಿರ್ಧರಿಸಿದ್ದಾರೆ. ಸಭೆಯಲ್ಲಿರುವ ತನ್ನ ಸ್ಥಾನದ ನಿಮಿತ್ತ ಮತ್ತು ತಾನು ವಯೋವೃದ್ಧನಾಗಿದ್ದರಿಂದ ಯೋಹಾನನು ತನ್ನನ್ನು ತಾನು ಹಿರಿಯನೆಂದು ಕರೆದುಕೊಳ್ಳುತ್ತಾನೆ. ಇದರ ಪ್ರಾರಂಭ, ಮುಕ್ತಾಯ, ಶೈಲಿ ಮತ್ತು ಹೊರನೋಟವು 2 ಯೋಹಾನನ ಪತ್ರಿಕೆಗೆ ಸದೃಶವಾಗಿದೆ, ಒಬ್ಬನೇ ಗ್ರಂಥಕರ್ತನು ಎರಡೂ ಪತ್ರಿಕೆಗಳನ್ನು ಬರೆದಿದ್ದಾನೆ ಎಂಬುದರಲ್ಲಿ ಸ್ವಲ್ಪ ಸಂದೇಹವಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 85-95 ರ ನಡುವೆ ಬರೆಯಲ್ಪಟ್ಟಿದೆ.
ಆಸ್ಯ ಸೀಮೆಯಲ್ಲಿರುವ ಎಫೆಸದಿಂದ ಯೋಹಾನನು ಈ ಪತ್ರಿಕೆಯನ್ನು ಬರೆದಿದ್ದಾನೆ.
ಸ್ವೀಕೃತದಾರರು
3 ನೆಯ ಯೋಹಾನನ ಪತ್ರಿಕೆಯನ್ನು ಗಾಯನಿಗೆ ಸಂಬೋಧಿಸಿ ಬರೆಯಲಾಗಿದೆ, ಈ ಗಾಯನು ಯೋಹಾನನಿಗೆ ಪರಿಚಿತವಾಗಿದ್ದ ಸಭೆಗಳ ಪೈಕಿ ಒಂದರ ಪ್ರಮುಖ ಸದಸ್ಯನಾಗಿದ್ದನು ಎಂದು ಸ್ಪಷ್ಟವಾಗಿ ತೋರಿಬರುತ್ತದೆ. ಗಾಯನು ಅವನ ಅತಿಥಿ ಸತ್ಕಾರಕ್ಕಾಗಿ ಹೆಸರುವಾಸಿಯಾಗಿದ್ದನು.
ಉದ್ದೇಶ
ಸ್ಥಳೀಯ ಸಭೆಯನ್ನು ನಡೆಸುವುದರಲ್ಲಿರುವ ದುರಭಿಮಾನ ಮತ್ತು ದುರಹಂಕಾರದ ಕುರಿತು ಎಚ್ಚರಿಸಲು, ತನ್ನ ಅಗತ್ಯಗಳಿಗಿಂತ ಸತ್ಯದ ಬೋಧಕರ ಅಗತ್ಯಗಳನ್ನು ಹೆಚ್ಚೆಂದು ಪರಿಗಣಿಸಿದ ಗಾಯನ ಪ್ರಶಂಸನೀಯ ನಡವಳಿಕೆಯನ್ನು ಪ್ರಶಂಸಿಸಲು (ವ. 5-8), ಕ್ರಿಸ್ತನ ಧ್ಯೇಯಕ್ಕಿಂತಲೂ ಹೆಚ್ಚಾಗಿ ತನ್ನ ಸ್ವಂತ ಅಗತ್ಯಗಳಿಗೆ ಆದ್ಯತೆ ಕೊಟ್ಟಂಥ ದಿಯೊತ್ರೇಫನ ನೀಚವಾದ ನಡವಳಿಕೆಗೆ ವಿರುದ್ಧವಾಗಿ ಎಚ್ಚರಿಸಲು (ವ. 9), ಸಂಚಾರಿ ಬೋಧಕನು ಮತ್ತು 3 ನೇ ಯೋಹಾನನ ಪತ್ರಿಕೆಯ ಓಲೆಕಾರನು ಆದ ದೇಮೇತ್ರಿಯನನ್ನು ಪ್ರಶಂಸಿಸಲು (ವ. 12), ತನ್ನ ಓದುಗರಿಗೆ ಶೀಘ್ರದಲ್ಲೇ ಅವರನ್ನು ಭೇಟಿಮಾಡುವುದಕ್ಕಾಗಿ ಬರುತ್ತೇನೆ ಎಂದು ತಿಳಿಸಲು ಯೋಹಾನನು ಇದನ್ನು ಬರೆದನು (ವ. 14).
ಮುಖ್ಯಾಂಶ
ವಿಶ್ವಾಸಿಯ ಅತಿಥಿ ಸತ್ಕಾರ
ಪರಿವಿಡಿ
1. ಪೀಠಿಕೆ — 1:1-4
2. ಸಂಚಾರಿ ಸೇವಕರಿಗೆ ಅತಿಥಿ ಸತ್ಕಾರ — 1:5-8
3. ಕೆಟ್ಟದ್ದನಲ್ಲ ಆದರೆ ಒಳ್ಳೆಯದನ್ನು ಅನುಸರಿಸಿರಿ — 1:9-12
4. ಸಮಾಪ್ತಿ — 1:13-15