1 ತಿಮೊಥೆಯನಿಗೆ
ಗ್ರಂಥಕರ್ತೃತ್ವ
ಈ ಪತ್ರಿಕೆಯ ಗ್ರಂಥಕರ್ತನು ಪೌಲನು, ಇದು ಅಪೊಸ್ತಲನಾದ ಪೌಲನಿಂದ ಬರೆಯಲ್ಪಟ್ಟಿದೆ ಎಂದು 1 ತಿಮೊಥೆಯನ ಗ್ರಂಥವು ಸ್ಪಷ್ಟವಾಗಿ ತಿಳಿಸುತ್ತದೆ, “ನಮ್ಮ ರಕ್ಷಕನಾದ ದೇವರ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು” (1 ತಿಮೊ. 1:1). ಆದಿ ಸಭೆಯು ಇದನ್ನು ಪೌಲನ ಯಥಾರ್ಥವಾದ ಪತ್ರಿಕೆ ಎಂದು ಸ್ಪಷ್ಟವಾಗಿ ಅಂಗೀಕರಿಸಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 62-64 ರ ನಡುವೆ ಬರೆಯಲ್ಪಟ್ಟಿದೆ.
ಪೌಲನು ಎಫೆಸದಲ್ಲಿ ತಿಮೊಥೆಯನನ್ನು ಬಿಟ್ಟು, ಮಕೆದೋನ್ಯಕ್ಕೆ ಹೋದನು, ಅಲ್ಲಿಂದ ಆತನು ಅವನಿಗೆ ಈ ಪತ್ರಿಕೆಯನ್ನು ಬರೆದನು. (1 ತಿಮೊ. 1:3; 3:14,15).
ಸ್ವೀಕೃತದಾರರು
ಪೌಲನ ಪ್ರಯಾಣದ ಸಂಗಡಿಗನು ಮತ್ತು ಅವನ ಮಿಷನರಿ ಪ್ರಯಾಣದಲ್ಲಿ ಸಹಾಯಕನು ಆಗಿದ್ದ ತಿಮೊಥೆಯನಿಗೆ ಸಂಬೋಧಿಸಿ ಬರೆಯಲಾಗಿರುವುದ್ದರಿಂದ ಮೊದಲ ತಿಮೊಥೆಯನ ಪುಸ್ತಕಕ್ಕೆ ಅವನ ಹೆಸರನ್ನು ಇಡಲಾಗಿದೆ. ತಿಮೊಥೆಯನು ಮತ್ತು ಇಡೀ ಸಭೆಯು 1 ತಿಮೊಥೆಯನಿಗೆ ಬರೆದ ಪತ್ರಿಕೆಯ ಓದುಗರಾಗಿದ್ದಾರೆ.
ಉದ್ದೇಶ
ದೇವರ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಮೊಥೆಗೆ ಆದೇಶ ನೀಡಲು (3:14-15) ಮತ್ತು ತಿಮೊಥೆಯನು ಈ ಆದೇಶಗಳಿಗೆ ಸರಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಲು. ಈ ವಚನಗಳು 1 ತಿಮೊಥೆಯನ ಪುಸ್ತಕದ ಪೌಲನ ಉದ್ದೇಶದ ಹೇಳಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರ ಮನೆಯಲ್ಲಿ ಅಂದರೆ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ಜೀವಸ್ವರೂಪನಾದ ದೇವರ ಸಭೆಯಲ್ಲಿ ಜನರು ಹೇಗೆ ನಡೆದುಕೊಳ್ಳಬೇಕು ಅವರಿಗೆ ತಿಳಿಯುವಂತೆ ಇದನ್ನು ಬರೆಯುತ್ತಿದ್ದಾನೆಂದು ಅವನು ಹೇಳಿದ್ದಾನೆ. ಈ ವಾಕ್ಯಭಾಗವು ಪೌಲನು ಪತ್ರಿಕೆಗಳನ್ನು ಕಳುಹಿಸಿ, ಸಭೆಗಳನ್ನು ಹೇಗೆ ಬಲಪಡಿಸಬೇಕು ಮತ್ತು ಕಟ್ಟಬೇಕು ಎಂದು ತನ್ನ ಜನರಿಗೆ ಆದೇಶಿಸುತ್ತಿರುವುದನ್ನು ಗೋಚರಪಡಿಸುತ್ತದೆ.
ಮುಖ್ಯಾಂಶ
ಯುವ ಶಿಷ್ಯನಿಗೆ ಆದೇಶಗಳು
ಪರಿವಿಡಿ
1. ಸೇವೆಗಾಗಿರುವ ಅಭ್ಯಾಸಗಳು — 1:1-20
2. ಸೇವೆಗಾಗಿರುವ ತತ್ವಗಳು — 2:1-3:16
3. ಸೇವೆಯಲ್ಲಿರುವ ಜವಾಬ್ದಾರಿಗಳು — 4:1-6:21