ನಹೂಮನು
ಗ್ರಂಥಕರ್ತೃತ್ವ
ನಹೂಮ ಪುಸ್ತಕದ ಗ್ರಂಥಕರ್ತನು ತನ್ನನ್ನು ಎಲ್ಕೋಷ್ ಊರಿನವನಾದ ನಹೂಮನೆಂದು (ಹೀಬ್ರೂ ಭಾಷೆಯಲ್ಲಿ “ಸಾಂತ್ವನಪಡಿಸುವವನು” ಅಥವಾ “ಸಂತೈಸುವವನು”) ಗುರುತಿಸಿಕೊಳ್ಳುತ್ತಾನೆ (1:1). ಅಶ್ಶೂರದ ಜನರಲ್ಲಿ, ನಿರ್ದಿಷ್ಟವಾಗಿ ಅವರ ರಾಜಧಾನಿಯಾದ ನಿನೆವೆಯಲ್ಲಿ ಪಶ್ಚಾತ್ತಾಪಡುವಂತೆ ಅವರಿಗೆ ಕರೆ ನೀಡಲು ಪ್ರವಾದಿಯಾದ ನಹೂಮನು ಕಳುಹಿಸಲ್ಪಟ್ಟನು. ನಿನವೆಯವರು ಪಶ್ಚಾತ್ತಾಪಪಡುವಂತೆ ಮಾಡಿದ ಯೋನನ ಸಂದೇಶದ 150 ವರ್ಷಗಳ ನಂತರ ಇದು ಸಂಭವಿಸಿತು, ಆದ್ದರಿಂದ ಅವರು ತಮ್ಮ ಹಿಂದಿನ ವಿಗ್ರಹಗಳ ಬಳಿಗೆ ಹಿಂದಿರುಗಿ ಹೋದರು ಎಂಬುದು ಸ್ಪಷ್ಟವಾಗಿ ಕಾಣಬರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 620-612 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ನಹೂಮ ಪುಸ್ತಕದ ದಿನಾಂಕವನ್ನು ನಿರ್ದುಷ್ಟವಾಗಿಯೂ ಸರಳವಾಗಿಯೂ ನಿರ್ಣಯಿಸಬಹುದು, ಏಕೆಂದರೆ ಇದು ಸ್ಪಷ್ಟವಾಗಿ ಎರಡು ಪ್ರಸಿದ್ಧ ಐತಿಹಾಸಿಕ ಘಟನೆಗಳ ನಡುವೆ ನಡೆದಿತ್ತು: ತೇಬೆಸ್ಸಿನ (ಆಮೋನಿನ) ಪತನ ಮತ್ತು ನಿನವೆಯ ಪತನ.
ಸ್ವೀಕೃತದಾರರು
ನಹೂಮನ ಪ್ರವಾದನೆಯನ್ನು ಉತ್ತರ ರಾಜ್ಯದ ಹತ್ತು ಕುಲಗಳನ್ನು ಸೆರೆಹಿಡಿದು ಕೊಂಡೊಯ್ಯಲಾದ ಅಶ್ಶೂರ್ಯದವರಿಗೂ, ಮತ್ತು ಅದೇ ರೀತಿಯಲ್ಲಿ ತಮಗೂ ಸಂಭವಿಸಬಹುದೆಂದು ಭಯಪಟ್ಟ ದಕ್ಷಿಣ ರಾಜ್ಯವಾದ ಯೆಹೂದದವರಿಗೂ ಸಹ ನುಡಿಯಲಾಯಿತು.
ಉದ್ದೇಶ
ದೇವರ ನ್ಯಾಯವು ಯಾವಾಗಲೂ ಸರಿಯಾಗಿರುತ್ತದೆ ಮತ್ತು ಯಾವಾಗಲೂ ನಂಬಲರ್ಹವಾಗಿರುತ್ತದೆ. ಆತನು ಒಂದು ಬಾರಿಗೆ ಕರುಣೆಯನ್ನು ದಯಪಾಲಿಸಲು ಆರಿಸಿಕೊಳ್ಳಬೇಕೇ, ಆ ಉತ್ತಮ ದಾನವು ಅಂತ್ಯದಲ್ಲಿ ಎಲ್ಲರಿಗೋಸ್ಕರವಾಗಿರುವ ಕರ್ತನ ನ್ಯಾಯದ ಪರಮ ತಿಳುವಳಿಕೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ದುರ್ಮಾರ್ಗಗಳಲ್ಲಿಯೇ ಮುಂದುವರೆಯುವುದಾದರೆ ಅವರಿಗೆ ಏನು ಸಂಭವಿಸಬಹುದು ಎಂಬ ತನ್ನ ವಾಗ್ದಾನದೊಂದಿಗೆ ದೇವರು ತನ್ನ ಪ್ರವಾದಿಯಾದ ಯೋನನನ್ನು 150 ವರ್ಷಗಳ ಹಿಂದೆಯೇ ಅವರ ಬಳಿಗೆ ಕಳುಹಿಸಿದ್ದನು. ಆ ಸಮಯದಲ್ಲಿ ಜನರು ಪಶ್ಚಾತ್ತಾಪಪಟ್ಟಿದ್ದರು ಆದರೆ ಈಗ ಹಿಂದೆ ಮಾಡುತ್ತಿದ್ದಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿ ಜೀವಿಸುತ್ತಿದ್ದರು. ಅಶ್ಶೂರ್ಯದವರು ತಮ್ಮ ವಿಜಯಗಳಲ್ಲಿ ಸಂಪೂರ್ಣವಾಗಿ ಕ್ರೂರರಾಗಿದ್ದರು. ಈಗ ನಹೂಮನು ಯೆಹೂದದ ಜನರಿಗೆ ಹತಾಶರಾಗಬೇಡಿರಿ ಏಕೆಂದರೆ ದೇವರು ನ್ಯಾಯತೀರ್ಪನ್ನು ಉಚ್ಚರಿಸಿದ್ದಾನೆ ಮತ್ತು ಅಶ್ಶೂರ್ಯದವರು ತಾವು ಅರ್ಹರಾಗಿರುವಂಥದ್ದನ್ನು ಶೀಘ್ರದಲ್ಲಿಯೇ ಹೊಂದಿಕೊಳ್ಳುತ್ತಾರೆ ಎಂದು ಹೇಳಿದನು.
ಮುಖ್ಯಾಂಶ
ಸಾಂತ್ವನ
ಪರಿವಿಡಿ
1. ದೇವರ ಪ್ರಭಾವ — 1:1-14
2. ದೇವರ ನ್ಯಾಯತೀರ್ಪು ಮತ್ತು ನಿನವೆ — 1:15-3:19