ಓಬದ್ಯನು
ಗ್ರಂಥಕರ್ತೃತ್ವ
ಪುಸ್ತಕದ ಗ್ರಂಥಕರ್ತೃತ್ವವು ಓಬದ್ಯ ಎಂಬ ಹೆಸರುಳ್ಳ ಓರ್ವ ಪ್ರವಾದಿಗೆ ಸೇರಿದ್ದೆನ್ನಲಾಗುತ್ತದೆ, ಆದರೆ ಅವನ ಜೀವನಚರಿತ್ರೆಯ ಬಗ್ಗೆ ಯಾವುದೇ ಮಾಹಿತಿಯು ನಮಗಿಲ್ಲ. ವಿದೇಶವಾದ ಎದೋಮಿನ ಕುರಿತಾಗಿರುವ ನ್ಯಾಯತೀರ್ಪಿನ ಈ ಪ್ರವಾದನೆಯ ಉದ್ದಕ್ಕೂ ಓಬದ್ಯನ್ನು ಯೆರೂಸಲೇಮಿನ ಬಗ್ಗೆ ಪ್ರಾಶಸ್ತ್ಯ ನೀಡುತ್ತಿರುವಂಥದ್ದು, ಓಬದ್ಯನು ದಕ್ಷಿಣ ರಾಜ್ಯವಾದ ಯೆಹೂದದಲ್ಲಿರುವ ಪವಿತ್ರ ಪಟ್ಟಣದ ಹತ್ತಿರದಿಂದ ಬಂದಿದ್ದಾನೆ ಎಂದು ನಾವು ಊಹಿಸಿಕೊಳ್ಳುವ ಅವಕಾಶವನ್ನುಂಟು ಮಾಡಿಕೊಡುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 605-586 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಓಬದ್ಯನ ಪುಸ್ತಕವು ಯೆರೂಸಲೇಮಿನ ಪತನವಾಗಿ ದೀರ್ಘಕಾಲವಾದ ಮೇಲೆ ಅಲ್ಲ (ಓಬದ್ಯ 11-14), ಅಂದರೆ, ಬಾಬಿಲೋನಿನ ಸೆರೆವಾಸದ ಸಮಯದಲ್ಲಿ ಬರೆದಿರುವ ಸಾಧ್ಯತೆಯಿದೆ.
ಸ್ವೀಕೃತದಾರರು
ಉದ್ದೇಶಿತವಾದ ಪ್ರೇಕ್ಷಕರು ಯಾರೆಂದರೆ ಎದೋಮ್ಯರ ಆಕ್ರಮಣದ ನಂತರ ಅವಶೇಷರಾದ ಯೆಹೂದದವರು.
ಉದ್ದೇಶ
ಓಬದ್ಯನು ದೇವರ ಪ್ರವಾದಿಯಾಗಿದ್ದು, ದೇವರಿಗೂ ಮತ್ತು ಇಸ್ರಾಯೇಲ್ಯರಿಗೂ ವಿರುದ್ಧ ಮಾಡಿರುವ ಎದೋಮನ ಪಾಪಗಳನ್ನು ಖಂಡಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾನೆ. ಎದೋಮ್ಯರು ಏಸಾವನ ವಂಶಸ್ಥರು ಮತ್ತು ಇಸ್ರಾಯೇಲ್ಯರು ಅವನ ಅವಳಿ ಸಹೋದರನಾದ ಯಾಕೋಬನ ವಂಶಸ್ಥರು. ಸಹೋದರರ ನಡುವಿನ ಜಗಳವು ಅವರ ವಂಶಸ್ಥರ ಮೇಲೆ ಪರಿಣಾಮವನ್ನುಂಟುಮಾಡಿತು. ಈ ಒಡಕು ಇಸ್ರಾಯೇಲ್ಯರು ಐಗುಪ್ತದಿಂದ ವಿಮೋಚನೆಯಾಗಿ ಹೋಗುವ ಸಮಯದಲ್ಲಿ ಇಸ್ರಾಯೇಲ್ಯರು ತಮ್ಮ ಸೀಮೆಯಿಂದ ಹಾದುಹೋಗುವುದನ್ನು ಎದೋಮ್ಯರು ನಿಷೇಧಿಸಲು ಕಾರಣವಾಯಿತು. ಎದೋಮಿನ ಅಹಂಕಾರದ ಪಾಪಗಳು ಈಗ ಕರ್ತನಿಂದ ಕಠಿಣವಾದ ನ್ಯಾಯತೀರ್ಪನ್ನು ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಆತನು ಅವರನ್ನು ಆಳುವಾಗ ದೇಶವನ್ನು ದೇವರ ಜನರಿಗೆ ಪುನಃಸ್ಥಾಪಿಸಿ ಕೊಡಲಾಗುವ ಕೊನೆಯ ದಿನಗಳಲ್ಲಿ ಉಂಟಾಗುವ ಚೀಯೋನಿನ ಬಿಡುಗಡೆ ಮತ್ತು ವಾಗ್ದಾನದ ನೆರವೇರಿಕೆಯೊಂದಿಗೆ ಈ ಪುಸ್ತಕವು ಕೊನೆಗೊಳ್ಳುತ್ತದೆ.
ಮುಖ್ಯಾಂಶ
ನೀತಿಯುತ ನ್ಯಾಯತೀರ್ಪು
ಪರಿವಿಡಿ
1. ಎದೋಮಿನ ವಿನಾಶ — 1:1-14
2. ಇಸ್ರಾಯೇಲಿನ ಅಂತಿಮ ವಿಜಯ — 1:15-21