ದಾನಿಯೇಲನು
ಗ್ರಂಥಕರ್ತೃತ್ವ
ಗ್ರಂಥಕರ್ತನ ಹೆಸರಿಗೆ ಅನುಗುಣವಾಗಿ ಈ ಪುಸ್ತಕಕ್ಕೆ ಹೆಸರಿಡಲಾಗಿದೆ, ದಾನಿಯೇಲನ ಪುಸ್ತಕವು ಯೆಹೂದ್ಯರ ಸೆರೆವಾಸಿಯಾಗಿ ಇಸ್ರಾಯೇಲಿನಿಂದ ಬಂದು ಬಾಬೆಲಿನಲ್ಲಿದ್ದ ಅವನ ಸಮಯದ ಉತ್ಪನ್ನವಾಗಿದೆ. “ದೇವರು ನನ್ನ ನ್ಯಾಯಾಧಿಪತಿ” ಎಂಬುದು “ದಾನಿಯೇಲನ” ಹೆಸರಿನ ಅರ್ಥವಾಗಿದೆ. ಪುಸ್ತಕವು ದಾನಿಯೇಲನು ತನ್ನ ಗ್ರಂಥಕರ್ತನು ಎಂದು 9:2; 10:2 ರಂತಹ ಹಲವಾರು ವಾಕ್ಯಭಾಗಗಳಲ್ಲಿ ಸೂಚಿಸುತ್ತದೆ. ಬಾಬಿಲೋನಿನ ರಾಜಧಾನಿಯಲ್ಲಿ, ರಾಜನಿಗೆ ಅವನು ಮಾಡುತ್ತಿದ್ದ ಸೇವೆಯು ಸಮಾಜದ ಅತ್ಯುನ್ನತ ಹಂತಗಳಿಗೆ ಪ್ರವೇಶಿಸುವಂಥ ಭಾಗ್ಯವನ್ನು ಅವನಿಗೆ ನೀಡಿತು, ಅಂತಹ ಸಮಯದಲ್ಲಿ ಯೆಹೂದ್ಯ ಸೆರೆವಾಸಿಗಳಿಗಾಗಿ ದಾನಿಯೇಲನು ತನ್ನ ಅನುಭವಗಳನ್ನು ಮತ್ತು ಪ್ರವಾದನೆಗಳನ್ನು ಬರೆದಿಟ್ಟನು. ಅವನ ಸ್ವಂತ ದೇಶ ಮತ್ತು ಸಂಸ್ಕೃತಿ ಅಲ್ಲದ ಕಡೆಯಲ್ಲಿ ದೇವರೊಂದಿಗಿನ ಅವನ ನಂಬಿಗಸ್ತಿಕೆಯ ಸೇವೆಯು ಅವನನ್ನು ಪವಿತ್ರಗ್ರಂಥದ ಎಲ್ಲಾ ಜನರಿಗಿಂತಲೂ ಅತ್ಯಂತ ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಡಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 605-530 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಸ್ವೀಕೃತದಾರರು
ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆವಾಸಿಗಳು ಮತ್ತು ಸತ್ಯವೇದದ ಮುಂದಿನ ಓದುಗಾರರು.
ಉದ್ದೇಶ
ದಾನಿಯೇಲನ ಪುಸ್ತಕವು ಪ್ರವಾದಿಯಾದ ದಾನಿಯೇಲನ ಕ್ರಿಯೆಗಳನ್ನು, ಪ್ರವಾದನೆಗಳನ್ನು ಮತ್ತು ದರ್ಶನಗಳನ್ನು ದಾಖಲಿಸುತ್ತದೆ. ದೇವರು ತನ್ನ ಹಿಂಬಾಲಕರಿಗೆ ನಂಬಿಗಸ್ತನಾಗಿದ್ದಾನೆಂದು ಪುಸ್ತಕವು ಬೋಧಿಸುತ್ತದೆ. ಪ್ರಲೋಭನೆ ಮತ್ತು ದಬ್ಬಾಳಿಕೆಯ ನಡುವೆಯೂ, ವಿಶ್ವಾಸಿಗಳು ತಮ್ಮ ಭೌತಿಕ ಕರ್ತವ್ಯಗಳನ್ನು ಮಾಡುತ್ತಿರುವ ಸಮಯದಲ್ಲಿಯೂ ದೇವರಿಗೆ ನಂಬಿಗಸ್ತರಾಗಿರಬೇಕು.
ಮುಖ್ಯಾಂಶ
ದೇವರ ಸಾರ್ವಭೌಮತ್ವ
ಪರಿವಿಡಿ
1. ದೊಡ್ಡ ಪ್ರತಿಮೆಯ ಕನಸಿನ ಬಗ್ಗೆ ದಾನಿಯೇಲನ ವ್ಯಾಖ್ಯಾನ — 1:1-2:49
2. ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವರನ್ನು ಉರಿಯುತ್ತಿರುವ ಕುಲುಮೆಯಿಂದ ರಕ್ಷಿಸಿದ್ದು — 3:1-30
3. ನೆಬೂಕದ್ನೆಚ್ಚರನ ಕನಸು — 4:1-37
4. ಗೋಡೆಯ ಮೇಲೆ ಬೆರಳು ಬರೆದದ್ದು ಮತ್ತು ದಾನಿಯೇಲನ ನಾಶನದ ಬಗ್ಗೆ ಪ್ರವಾದಿಸಿದ್ದು — 5:1-31
5. ದಾನಿಯೇಲನು ಸಿಂಹದ ಗವಿಯಲ್ಲಿ — 6:1-28
6. ನಾಲ್ಕು ಪ್ರಾಣಿಗಳ ದರ್ಶನ — 7:1-28
7. ಟಗರು, ಹೋತ ಮತ್ತು ಸಣ್ಣ ಕೊಂಬಿನ ದರ್ಶನ — 8:1-27
8. 70 ವರ್ಷಗಳ ಕುರಿತಾದ ದಾನಿಯೇಲನ ಪ್ರಾರ್ಥನೆಗೆ ಉತ್ತರ — 9:1-27
9. ಅಂತಿಮ ಮಹಾ ಯುದ್ಧದ ಕುರಿತಾದ ದಾನಿಯೇಲನ ದರ್ಶನ — 10:1-12:13