ನೆಹೆಮೀಯನು
ಗ್ರಂಥಕರ್ತೃತ್ವ
ಈ ಐತಿಹಾಸಿಕ ಪುಸ್ತಕದ ಪ್ರಾಥಮಿಕ ಗ್ರಂಥಕರ್ತನಾಗಿ ನೆಹೆಮೀಯನನ್ನು (ಯೆಹೋವನು ಸಂತೈಸುವನು) ಯೆಹೂದ್ಯ ಸಂಪ್ರದಾಯವು ಗುರುತಿಸುತ್ತದೆ. ಪುಸ್ತಕದ ಬಹುತೇಕ ಭಾಗವನ್ನು ಅವನ ಉತ್ತಮ ಪುರುಷ ದೃಷ್ಟಿಕೋನದಿಂದ ಬರೆಯಲಾಗಿದೆ. ಅವನ ತಾರುಣ್ಯ ಅಥವಾ ಹಿನ್ನಲೆಯ ಬಗ್ಗೆ ಏನೂ ತಿಳಿಸುವುದಿಲ್ಲ; ಪರ್ಷಿಯದ ರಾಜನ ಆಸ್ಥಾನದಲ್ಲಿ ಅರಸನಾದ ಅರ್ತಷಸ್ತನಿಗೆ (ನೆಹೆಮೀಯ 1:11-2:1) ವೈಯಕ್ತಿಕ ಪಾನಸೇವಕನಾಗಿ ಸೇವೆ ಸಲ್ಲಿಸುತ್ತಿರುವ ವಯಸ್ಕನಾಗಿ ನಾವು ಅವನನ್ನು ನೋಡುತ್ತೇವೆ. ಎಜ್ರನ ಪುಸ್ತಕದ ಉತ್ತರಭಾಗವಾಗಿ ನೆಹೆಮೀಯ ಪುಸ್ತಕವನ್ನು ಓದಬಹುದು ಮತ್ತು ಕೆಲವು ಪಂಡಿತರು ಇವೆರಡು ಮೂಲತಃ ಒಂದೇ ಕೃತಿಯೆಂದು ನಂಬುತ್ತಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ. ಪೂ. 457-400 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಈ ಕೃತಿಯು ಯೆಹೂದದಲ್ಲಿ, ಬಹುಶಃ ಯೆರೂಸಲೇಮಿನಲ್ಲಿ, ಬಾಬೆಲಿನಿಂದ ಹಿಂದಿರುಗಿದ ನಂತರ ಪರ್ಷಿಯಾದವರ ಅವಧಿಯಲ್ಲಿ ಬರೆಯಲ್ಪಟ್ಟಿತು.
ಸ್ವೀಕೃತದಾರರು
ನೆಹೆಮೀಯ ಪುಸ್ತಕದ ಉದ್ದೇಶಿತ ಪ್ರೇಕ್ಷಕರು ಬಾಬೆಲಿನ ಸೆರೆವಾಸದಿಂದ ಹಿಂತಿರುಗಿದ ಇಸ್ರಾಯೇಲ್ಯರ ಸಂತತಿಯವರು.
ಉದ್ದೇಶ
ದೇವರಾದುಕೊಂಡ ಆತನ ಜನರು ತಮ್ಮ ಮೇಲಿರುವ ದೇವರ ಶಕ್ತಿಯನ್ನು ಮತ್ತು ಪ್ರೀತಿಯನ್ನು ಹಾಗೂ ಆತನೊಂದಿಗಿರುವ ಅವರ ಒಡಂಬಡಿಕೆಯ ಜವಾಬ್ದಾರಿಗಳನ್ನು ತನ್ನ ಓದುಗಾರರು ಅರಿತುಕೊಳ್ಳಬೇಕೆಂದು ಗ್ರಂಥಕರ್ತನು ಸ್ಪಷ್ಟವಾಗಿ ಬಯಸಿದ್ದನು. ದೇವರು ಪ್ರಾರ್ಥನೆಗೆ ಉತ್ತರಿಸುತ್ತಾನೆ. ಆತನು ಜನರ ಜೀವನದಲ್ಲಿ ಆಸಕ್ತಿ ವಹಿಸುತ್ತಾನೆ, ಅವರು ತನ್ನ ಆಜ್ಞೆಗಳನ್ನು ಅನುಸರಿಸಲು ಬೇಕಾದ ಅಗತ್ಯವನ್ನು ಪೂರೈಸುತ್ತಾನೆ. ಜನರು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳಬೇಕು. ದೇವರ ಹಿಂಬಾಲಕರ ಜೀವನದಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನವಿಲ್ಲ. ಬಡವರನ್ನು ಶೋಷಿಸಬಾರದೆಂದು ಶ್ರೀಮಂತ ವ್ಯಕ್ತಿಗಳಿಗೂ ಮತ್ತು ಕುಲೀನರಿಗೂ ನೆಹೆಮೀಯನು ನೆನಪಿಸಿದನು.
ಮುಖ್ಯಾಂಶ
ಪುನರ್ನಿರ್ಮಾಣ
ಪರಿವಿಡಿ
1. ದೇಶಾಧಿಪತಿಯಾಗಿ ನೆಹೆಮೀಯನ ಮೊದಲ ಅವಧಿ — 1:1-12:47
2. ದೇಶಾಧಿಪತಿಯಾಗಿ ನೆಹೆಮೀಯನ ಎರಡನೇ ಅವಧಿ — 13:1-31