2 ಪೂರ್ವಕಾಲವೃತ್ತಾಂತ
ಗ್ರಂಥಕರ್ತೃತ್ವ
ಯೆಹೂದ್ಯ ಸಂಪ್ರದಾಯವು ಶಾಸ್ತ್ರಿಯಾದ ಎಜ್ರನಿಗೆ ಗ್ರಂಥಕರ್ತನ ಮನ್ನಣೆಯನ್ನು ನೀಡುತ್ತದೆ. 2 ಪೂರ್ವಕಾಲವೃತ್ತಾಂತವು ಸೊಲೊಮೋನನ ಆಡಳಿತದ ವೃತ್ತಾಂತದೊಂದಿಗೆ ಪ್ರಾರಂಭವಾಗುತ್ತದೆ. ಸೊಲೊಮೋನನ ಮರಣದ ನಂತರ ಸಾಮ್ರಾಜ್ಯವು ವಿಭಜನೆಯಾಯಿತು. ಎರಡನೇ ಪೂರ್ವಕಾಲವೃತ್ತಾಂತವು, 1 ಪೂರ್ವಕಾಲವೃತ್ತಾಂತಕ್ಕೆ ಸಹಪುಸ್ತಕವಾಗಿದ್ದು, ಇಬ್ರಿಯ ಜನರ ಚರಿತ್ರೆಯನ್ನು ಅರಸನಾದ ಸೊಲೊಮೋನನ ಆಳ್ವಿಕೆಯಿಂದ ಬಾಬೆಲಿನ ಸೆರೆವಾಸದವರೆಗೂ ಮುಂದುವರಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 450-425 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬೆಲಿನ ಸೆರೆವಾಸದಿಂದ ಬಂದ ಇಸ್ರಾಯೇಲಿನ ಹಿಂದಿರುಗಿರುವಿಕೆಯ ನಂತರವಿರುವಂಥದ್ದು ಎಂಬುದು ಸ್ಪಷ್ಟವಾಗಿದ್ದರು, ಪೂರ್ವಕಾಲವೃತ್ತಾಂತದ ದಿನಾಂಕವನ್ನು ನಿಗದಿಪಡಿಸುವುದು ಕಷ್ಟಸಾಧ್ಯವಾಗಿದೆ.
ಸ್ವೀಕೃತದಾರರು
ಪ್ರಾಚೀನ ಯೆಹೂದ್ಯ ಜನರು ಮತ್ತು ಸತ್ಯವೇದದ ನಂತರದ ಓದುಗಾರರು.
ಉದ್ದೇಶ
2 ಪೂರ್ವಕಾಲವೃತ್ತಾಂತ ಪುಸ್ತಕವು ಬಹುತೇಕ 2 ಸಮುವೇಲನ ಮತ್ತು 2 ಅರಸುಗಳ ಅದೇ ಮಾಹಿತಿಯನ್ನು ಒಳಗೊಂಡಿದೆ. 2 ಪೂರ್ವಕಾಲವೃತ್ತಾಂತ ಪುಸ್ತಕವು ಆ ಕಾಲಾವಧಿಯ ಯಾಜಕತ್ವದ ಅಂಶಕ್ಕೆ ಹೆಚ್ಚು ಗಮನಹರಿಸುತ್ತದೆ. 2 ಪೂರ್ವಕಾಲವೃತ್ತಾಂತವು ಮುಖ್ಯವಾಗಿ ದೇಶದ ಧಾರ್ಮಿಕ ಚರಿತ್ರೆಯ ಮೌಲ್ಯಮಾಪನವಾಗಿದೆ.
ಮುಖ್ಯಾಂಶ
ಇಸ್ರಾಯೇಲಿನ ಆಧ್ಯಾತ್ಮಿಕ ಪರಂಪರೆ
ಪರಿವಿಡಿ
1. ಸೊಲೊಮೋನನ ನಾಯಕತ್ವದಲ್ಲಿ ಇಸ್ರಾಯೇಲಿನ ಚರಿತ್ರೆ — 1:1-9:31
2. ರೆಹಬ್ಬಾಮನಿಂದ ಆಹಾಜನ ವರೆಗೆ — 10:1-28:37
3. ಹಿಜ್ಕೀಯನಿಂದ ಯೆಹೂದದ ಅಂತ್ಯದವರೆಗೆ — 29:1-36:23