1 ಪೂರ್ವಕಾಲವೃತ್ತಾಂತ
ಗ್ರಂಥಕರ್ತೃತ್ವ
1 ಪೂರ್ವಕಾಲವೃತ್ತಾಂತವು ಅದರ ಗ್ರಂಥಕರ್ತನನ್ನು ನಿರ್ದಿಷ್ಟವಾಗಿ ಹೆಸರಿಸುವುದಿಲ್ಲ, ಯೆಹೂದ್ಯ ಸಂಪ್ರದಾಯವು ಶಾಸ್ತ್ರಿಯಾದ ಎಜ್ರನನ್ನು ಗ್ರಂಥಕರ್ತನೆಂದು ಪರಿಗಣಿಸುತ್ತದೆ. 1 ಪೂರ್ವಕಾಲವೃತ್ತಾಂತವು ಇಸ್ರಾಯೇಲ್ಯರ ಕುಟುಂಬಗಳ ಪಟ್ಟಿಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇಸ್ರಾಯೇಲ್ ಎಂದು ಕರೆಯಲ್ಪಡುವ ಸಾಮ್ರಾಜ್ಯದ ಮೇಲಿನ ದಾವೀದನ ಆಡಳಿತದ ವೃತ್ತಾಂತದೊಂದಿಗೆ ಇದು ಮುಂದುವರೆಯುತ್ತದೆ, ಈ ಪುಸ್ತಕವು ಹಳೆಯ ಒಡಂಬಡಿಕೆಯ ಅತ್ಯುನ್ನತ ವ್ಯಕ್ತಿಗಳಲ್ಲಿ ಒಬ್ಬನಾದ ಅರಸನಾದ ದಾವೀದನ ಕಥೆಯ ನಿಕಟ ಚಿತ್ರಣವಾಗಿದೆ. ಇದರ ವಿಶಾಲ ನೋಟವು ಪ್ರಾಚೀನ ಇಸ್ರಾಯೇಲಿನ ರಾಜಕೀಯ ಮತ್ತು ಧಾರ್ಮಿಕ ಇತಿಹಾಸವನ್ನು ಒಳಗೊಂಡಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ. ಪೂ. 450-400 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಇದು ಬಾಬೆಲಿನ ಸೆರೆವಾಸದಿಂದ ಮರಳಿಬಂದ ಇಸ್ರಾಯೇಲ್ಯರ ಹಿಂದಿರುಗುವಿಕೆಯ ನಂತರ ಎಂಬುದು ಸ್ಪಷ್ಟವಾಗಿದೆ. 1 ಪೂರ್ವಕಾಲವೃತ್ತಾಂತ 3:19-24 ರಲ್ಲಿರುವ ಪಟ್ಟಿಯು ದಾವೀದನ ವಂಶಾವಳಿಯನ್ನು ಜೆರುಬ್ಬಾಬೆಲಿನ ನಂತರದ ಆರನೇ ಪೀಳಿಗೆಯವರೆಗೆ ವಿಸ್ತರಿಸಿದೆ.
ಸ್ವೀಕೃತದಾರರು
ಪ್ರಾಚೀನ ಯೆಹೂದ್ಯ ಜನರು ಮತ್ತು ಸತ್ಯವೇದದ ಮುಂದಿನ ಓದುಗಾರರು.
ಉದ್ದೇಶ
ಹಿಂದಿರುಗಿ ಬಂದ ಇಸ್ರಾಯೇಲ್ಯರಿಗೆ ದೇವರನ್ನು ಆರಾಧಿಸುವುದು ಹೇಗೆ ಎಂದು ತಿಳಿದುಕೊಳ್ಳುವಂತೆ ಸಹಾಯ ಮಾಡಲು 1 ಪೂರ್ವಕಾಲವೃತ್ತಾಂತ ಪುಸ್ತಕವನ್ನು ಸೆರೆವಾಸದ ನಂತರ ಬರೆಯಲ್ಪಟ್ಟಿತು. ಇದು ಯೆಹೂದ, ಬೆನ್ಯಾಮೀನ್ ಮತ್ತು ಲೇವಿಯರ ಕುಲಗಳ ದಕ್ಷಿಣ ಸಾಮ್ರಾಜ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಈ ಕುಲಗಳು ದೇವರಿಗೆ ಹೆಚ್ಚು ನಂಬಿಗಸ್ತರಾಗಿರಬೇಕೆಂದು ಉದ್ದೇಶಿಸಲಾಗಿದೆ. ದೇವರು ದಾವೀದನ ಮನೆತನವನ್ನು ಅಥವಾ ಆಳ್ವಿಕೆಯನ್ನು ಶಾಶ್ವತವಾಗಿ ಸ್ಥಾಪಿಸಲು ದಾವೀದನೊಂದಿಗೆ ತನ್ನ ಒಡಂಬಡಿಕೆಯನ್ನು ಗೌರವಿಸಿದನು. ಭೂಲೋಕದ ಅರಸರಿಗೆ ಅದನ್ನು ಮಾಡಲು ಆಗುವುದಿಲ್ಲ, ದಾವೀದ ಮತ್ತು ಸೊಲೊಮೋನನ ಮೂಲಕ, ದೇವರು ತನ್ನ ದೇವಾಲಯವನ್ನು ಸ್ಥಾಪಿಸಿದನು, ಜನರು ಅಲ್ಲಿಗೆ ಬಂದು ಆರಾಧಿಸಬಹುದು. ಸೊಲೊಮೋನನ ದೇವಾಲಯವು ಬಾಬೆಲಿನವರ ಆಕ್ರಮಣದಿಂದ ನಾಶವಾಯಿತು.
ಮುಖ್ಯಾಂಶ
ಇಸ್ರಾಯೇಲ್ಯರ ಆಧ್ಯಾತ್ಮಿಕ ಚರಿತ್ರೆ
ಪರಿವಿಡಿ
1. ವಂಶಾವಳಿಗಳು — 1:1-9:44
2. ಸೌಲನ ಮರಣ — 10:1-14
3. ದಾವೀದನ ಅಭಿಷೇಕ ಮತ್ತು ರಾಜತ್ವ — 11:1-29:30