ನ್ಯಾಯಸ್ಥಾಪಕರು
ಗ್ರಂಥಕರ್ತೃತ್ವ
ನ್ಯಾಯಸ್ಥಾಪಕರ ಗ್ರಂಥವು ಈ ಪುಸ್ತಕವನ್ನು ಬರೆದವರು ಯಾರೆಂಬ ಸುಳಿವನ್ನು ನೀಡುವುದಿಲ್ಲ, ಆದರೆ ಯೆಹೂದ್ಯ ಸಂಪ್ರದಾಯವು ಪ್ರವಾದಿಯಾದ ಸಮುವೇಲನನ್ನು ಗ್ರಂಥಕರ್ತನ್ನಾಗಿ ಹೆಸರಿಸುತ್ತದೆ, ಸಮುವೇಲನು ಕೊನೆಯ ನ್ಯಾಯಸ್ಥಾಪಕನು. ನ್ಯಾಯಸ್ಥಾಪಕರ ಗ್ರಂಥಕರ್ತನು ಖಂಡಿತವಾಗಿಯೂ ರಾಜಪ್ರಭುತ್ವದ ಆರಂಭಿಕ ದಿನಗಳಲ್ಲಿ ಜೀವಿಸಿದವನಾಗಿದ್ದಾನೆ. “ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ” ಎಂಬ ಪುನರಾವರ್ತಿತ ಹೇಳಿಕೆಗಳು (ನ್ಯಾಯಾಧೀಶರು 17:6; 18:1; 19:1; 21:25) ಪುಸ್ತಕದಲ್ಲಿ ನಡೆಯುತ್ತಿರುವ ಘಟನೆಗಳ ಮತ್ತು ಅದರ ಬರವಣಿಗೆಯ ಸಮಯದ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. “ನ್ಯಾಯಸ್ಥಾಪಕರು” ಎಂಬ ಪದವು “ರಕ್ಷಕರು” ಎಂಬ ಅರ್ಥವನ್ನು ನೀಡುತ್ತದೆ. ಮುಖ್ಯವಾಗಿ ನ್ಯಾಯಸ್ಥಾಪಕರು ಪರದೇಶಿ ಪೀಡಕರಿಂದ ಇಸ್ರಾಯೇಲ ಜನರನ್ನು ಬಿಡಿಸುವವರಾಗಿದ್ದರು. ಅವರಲ್ಲಿ ಕೆಲವರು ವ್ಯಾಜ್ಯಗಳನ್ನು ತೀರಿಸುವ ಪ್ರಭುಗಳಾಗಿಯೂ ಮತ್ತು ನ್ಯಾಯಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,043 - 1,000 ನಡುವಿನ ಕಾಲದಲ್ಲಿ ಬರೆದಿರಬಹುದು.
ದಾವೀದನ ಆಳ್ವಿಕೆಯ ಸಮಯದಲ್ಲಿ ನ್ಯಾಯಸ್ಥಾಪಕರ ಪುಸ್ತಕವನ್ನು ಸಂಕಲಿಸಿರಬಹುದು ಮತ್ತು ಯೆಹೋಶುವನ ಮರಣದ ನಂತರ ಕಾರ್ಯನಿರ್ವಹಿಸುತ್ತಿದ್ದ ನಿಷ್ಪ್ರಯೋಜಕವಾದ ವ್ಯವಸ್ಥೆಗೆ ತದ್ವಿರುದ್ಧವಾಗಿ ರಾಜಪ್ರಭುತ್ವದ ಪ್ರಯೋಜನಗಳನ್ನು ಪ್ರದರ್ಶಿಸುವುದು ಅದರ ಮಾನವ ಉದ್ದೇಶವಾಗಿದೆ ಎಂದು ತೋರುತ್ತದೆ.
ಸ್ವೀಕೃತದಾರರು
ಇಸ್ರಾಯೇಲ ಜನರು ಮತ್ತು ಸತ್ಯವೇದದ ಮುಂದಿನ ಎಲ್ಲಾ ಓದುಗಾರರು.
ಉದ್ದೇಶ
ದೇಶವನ್ನು ಜಯಿಸಿ ವಶಪಡಿಸಿಕೊಂಡ ಸಮಯದಿಂದ ಇಸ್ರಾಯೇಲಿನ ಮೊದಲ ಅರಸನ ತನಕದ ಐತಿಹಾಸಿಕ ಕಾಲವನ್ನು ವಿವರಿಸಲು, ಇತಿಹಾಸವನ್ನು ಇದ್ದ ಹಾಗೆಯೇ ಸುಮ್ಮನೇ ಪ್ರಸ್ತುತಪಡಿಸುವುದಕ್ಕಾಗಿಯಲ್ಲ, ಆದರೆ ನ್ಯಾಯಸ್ಥಾಪಕರ ಅವಧಿಯಲ್ಲಿನ ದೈವಶಾಸ್ತ್ರದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು (24:14-28; 2:6-13), ಜನರು ಆತನೊಂದಿಗಿನ ತಮ್ಮ ಒಡಂಬಡಿಕೆಯನ್ನು ಮುರಿದುಹಾಕಿದಾಗಲೂ ಯೆಹೋವನು ಅಬ್ರಹಾಮನಿಗೆ ಮಾಡಿದ ಒಡಂಬಡಿಕೆಗೆ ನಂಬಿಗಸ್ತನಾಗಿದ್ದನು ಎಂದು ಪ್ರಸ್ತುತಪಡಿಸಲು, ಯೆಹೋವನು ತನ್ನ ಒಡಂಬಡಿಕೆಗೆ ನಂಬಿಗಸ್ತನಾಗಿರುತ್ತಾನೆ ಮತ್ತು ಆತನು ನ್ಯಾಯಸ್ಥಾಪಕನು ಅಥವಾ ರಾಜನು ಅಲ್ಲ ಎಂದು ಜನರಿಗೆ ನೆನಪಿಸಲು ಉದ್ದೇಶವಾಗಿರುತ್ತದೆ, ಆದಾದ ನಂತರ ದುಷ್ಟನೊಂದಿಗೆ ಹೋರಾಡಲು ಪ್ರತಿಯೊಂದು ತಲೆಮಾರಿನಲ್ಲಿಯೂ ದೇವರು ಯಾರನ್ನಾದರೂ ಎಬ್ಬಿಸುವುದಾದರೆ (ಆದಿ 3:15) ಆಗ ನ್ಯಾಯಸ್ಥಾಪಕರ ಸಂಖ್ಯೆಯು ತಲೆಮಾರುಗಳ ಸಂಖ್ಯೆಗೆ ಸಮಾನವಾಗಿರುತ್ತದೆ.
ಮುಖ್ಯಾಂಶ
ಕೆಡುವಿಕೆ ಮತ್ತು ಬಿಡುಗಡೆ
ಪರಿವಿಡಿ
1. ನ್ಯಾಯಸ್ಥಾಪಕರ ಅಡಿಯಲ್ಲಿ ಇಸ್ರಾಯೇಲ್ಯರ ಪರಿಸ್ಥಿತಿ — 1:1-3:6
2. ಇಸ್ರಾಯೇಲ್ಯರ ನ್ಯಾಯಸ್ಥಾಪಕರು — 3:7-16:31
3. ಇಸ್ರಾಯೇಲ್ಯರ ಪಾಪಾತ್ಮವನ್ನು ತೋರಿಸುವ ಘಟನೆಗಳು — 17:1-21:25