ಯೋವೇಲನು
ಗ್ರಂಥಕರ್ತೃತ್ವ
ಪ್ರವಾದಿಯಾದ ಯೋವೇಲನು ಇದರ ಗ್ರಂಥಕರ್ತನೆಂದು (ಯೋವೇಲ 1:1) ಎಂದು ಈ ಪುಸ್ತಕವು ಹೇಳುತ್ತದೆ. ಪುಸ್ತಕದಲ್ಲಿರುವ ಕೆಲವು ವೈಯಕ್ತಿಕ ವಿವರಗಳಲ್ಲದೆ ಪ್ರವಾದಿಯಾದ ಯೋವೇಲನ ಕುರಿತಾಗಿ ಹೆಚ್ಚೇನೂ ನಮಗೆ ತಿಳಿದಿಲ್ಲ. ಅವನು ತನ್ನನ್ನು ತಾನು ಪೆತೂವೇಲನ ಮಗನೆಂದು ಗುರುತಿಸಿಕೊಂಡನು, ಯೆಹೂದದ ಜನರಿಗೆ ಬೋಧಿಸಿದನು ಮತ್ತು ಯೆರೂಸಲೇಮಿನ ಕುರಿತು ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿದನು. ಯೋವೇಲನು ಯಾಜಕರ ಮತ್ತು ದೇವಾಲಯದ ಬಗ್ಗೆ ಅನೇಕ ವಿವರಣೆಗಳನ್ನು ನೀಡಿದ್ದಾನೆ, ಇದು ಯೆಹೂದದ ಆರಾಧನ ಕೇಂದ್ರದ ಕುರಿತಾದ ಸುಪರಿಚಯವನ್ನು ಸೂಚಿಸುತ್ತದೆ (ಯೋವೇಲ 1:13-14; 2:14,17).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 835-600 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಹುಶಃ ಯೋವೇಲನು ಹಳೆಯ ಒಡಂಬಡಿಕೆಯ ಇತಿಹಾಸದ ಪರ್ಷಿಯನ್ ಕಾಲಾವಧಿಯಲ್ಲಿ ಜೀವಿಸಿದ್ದಿರಬಹುದು. ಆ ಸಮಯದಲ್ಲಿ, ಪರ್ಷಿಯಾದವರು ಯೆಹೂದ್ಯರಲ್ಲಿ ಕೆಲವರಿಗೆ ಯೆರೂಸಲೇಮಿಗೆ ಹಿಂದಿರುಗಿ ಹೋಗಲು ಅನುಮತಿ ನೀಡಿದರು ಮತ್ತು ಅಂತಿಮವಾಗಿ ದೇವಾಲಯವನ್ನು ಮರುನಿರ್ಮಾಣ ಮಾಡಲಾಯಿತು. ಯೋವೇಲನಿಗೆ ದೇವಾಲಯದ ಬಗ್ಗೆ ಚೆನ್ನಾಗಿ ತಿಳಿದಿತ್ತು, ಆದ್ದರಿಂದ ಅವನು ಅದರ ಪುನಃಸ್ಥಾಪನೆಯ ನಂತರದ ಕಾಲಾವಧಿಗೆ ಸೇರಿದವನಾಗಿದ್ದಾನೆಂದು ನಿರ್ಣಯಿಸಬಹುದು.
ಸ್ವೀಕೃತದಾರರು
ಇಸ್ರಾಯೇಲ್ ಜನರು ಮತ್ತು ನಂತರದ ಸತ್ಯವೇದದ ಓದುಗಾರರೆಲ್ಲರು.
ಉದ್ದೇಶ
ದೇವರು ಪಶ್ಚಾತ್ತಾಪ ಪಡುವವರಿಗೆ ಕ್ಷಮಾಪಣೆಯನ್ನು ನೀಡುವಂಥ ಕರುಣಾಮಯಿಯಾಗಿದ್ದಾನೆ. ಪುಸ್ತಕವು ಎರಡು ಪ್ರಮುಖ ಘಟನೆಗಳಿಂದ ವೈಶಿಷ್ಟ್ಯವಾದುದು ಆಗಿದೆ. ಒಂದು ಮಿಡತೆಗಳ ಆಕ್ರಮಣ ಮತ್ತೊಂದು ಆತ್ಮನ ಸುರಿಸುವಿಕೆ. ಇದರ ಆರಂಭಿಕ ನೆರವೇರಿಕೆಯು ಪಂಚಾಶತ್ತಮ ದಿನದಲ್ಲಿ ನಡೆದ್ದುದರ ಬಗ್ಗೆ ಅ.ಕೃ. 2 ರಲ್ಲಿ ಪೇತ್ರನಿಂದ ಉಲ್ಲೇಖಿಸಲ್ಪಟ್ಟಿದೆ.
ಮುಖ್ಯಾಂಶ
ಕರ್ತನ ದಿನ
ಪರಿವಿಡಿ
1. ಇಸ್ರಾಯೇಲಿನ ಮೇಲೆ ಮಿಡತೆಗಳ ಆಕ್ರಮಣ — 1:1-20
2. ದೇವರ ಶಿಕ್ಷೆ — 2:1-17
3. ಇಸ್ರಾಯೇಲಿನ ಪುನಃಸ್ಥಾಪನೆ — 2:18-32
4. ಜನಾಂಗಗಳ ಕುರಿತು ದೇವರ ನ್ಯಾಯತೀರ್ಪು ನಂತರ ತನ್ನ ಜನರ ಮಧ್ಯೆ ವಾಸಿಸುವುದು — 3:1-21