ಆದಿಕಾಂಡ
ಗ್ರಂಥಕರ್ತೃತ್ವ
ಯೆಹೂದ್ಯ ಸಂಪ್ರದಾಯವು ಮತ್ತು ಸತ್ಯವೇದದ ಇತರ ಗ್ರಂಥಕರ್ತರು, ಪ್ರವಾದಿಯು ಮತ್ತು ಇಸ್ರಾಯೇಲ್ಯರ ವಿಮೋಚಕನು ಆದ ಮೋಶೆಯನ್ನು, ಇಡೀ ಪಂಚಗ್ರಂಥಗಳು ಅಂದರೆ ಹಳೆಯ ಒಡಂಬಡಿಕೆಯ ಮೊದಲ ಐದು ಪುಸ್ತಕಗಳ ಗ್ರಂಥಕರ್ತನು ಎಂದು ಹೆಸರಿಸುತ್ತಾರೆ. ಐಗುಪ್ತದ ರಾಜಾಸ್ಥನಗಳಲ್ಲಿನ ಅವನ ಶಿಕ್ಷಣವು (ಅ. ಕೃ. 7:22) ಮತ್ತು ಹೀಬ್ರೂವಿನಲ್ಲಿ ದೇವರ ಹೆಸರಾದ ಯೆಹೋವನೊಂದಿಗಿನ ಅವನ ನಿಕಟ ಸಂಸರ್ಗವು ಈ ಪ್ರಮೇಯವನ್ನು ಬೆಂಬಲಿಸುತ್ತದೆ. ಸ್ವತಃ ಯೇಸುವೇ ಮೋಶೆಯ ಗ್ರಂಥಕರ್ತೃತ್ವವನ್ನು ದೃಢಪಡಿಸಿದನು (ಯೋಹಾನ 5:45-47), ಆತನ ಸಮಯದ ಶಾಸ್ತ್ರಿಗಳು ಮತ್ತು ಫರಿಸಾಯರು ಹಾಗೆಯೇ ಮಾಡಿದರು (ಮತ್ತಾಯ 19:7; 22:24).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ. ಪೂ. 1,446 - 1,405 ರ ನಡುವಿನ ಸಮಯ.
ಬಹುಶಃ ಮೋಶೆಯು ಈ ಪುಸ್ತಕವನ್ನು ಇಸ್ರಾಯೇಲರು ಸೀನಾಯಿ ಅರಣ್ಯದಲ್ಲಿ ಪಾಳೆಯ ಹಾಕಿಕೊಂಡು ವಾಸಿಸುತ್ತಿದ್ದ ವರ್ಷದಲ್ಲಿ ಬರೆದಿರುವ ಸಾಧ್ಯತೆಯಿದೆ.
ಸ್ವೀಕೃತದಾರರು
ಐಗುಪ್ತದ ದಾಸತ್ವದಿಂದ ಬಿಡುಗಡೆಗೊಂಡ ಬಳಿಕ ವಾಗ್ದಾನ ದೇಶವಾದ ಕಾನಾನ್ ದೇಶವನ್ನು ಪ್ರವೇಶಿಸುವುದಕ್ಕಿಂತ ಮುಂಚೆಯಿದ್ದ ಇಸ್ರಾಯೇಲ್ಯರು ವಾಚಕರಾಗಿರಬಹುದು.
ಉದ್ದೇಶ
ತಮ್ಮ ಜನಾಂಗದ ‘ಕುಟುಂಬ-ಇತಿಹಾಸ’ ವನ್ನು ವಿವರಿಸಲು ಮೋಶೆ ಈ ಪುಸ್ತಕವನ್ನು ಬರೆದನು. ಆದಿಕಾಂಡವನ್ನು ಬರೆಯುವುದರಲ್ಲಿ ಮೋಶೆಯ ಉದ್ದೇಶವೇನಂದರೆ ಆ ಜನಾಂಗವು ಹೇಗೆ ಐಗುಪ್ತದ ದಾಸತ್ವದಲ್ಲಿ ಸಿಲುಕಿಕೊಂಡಿತ್ತು ಎಂದು ವಿವರಿಸಲು (1:8), ಅವರು ಪ್ರವೇಶಿಸಲಿಕ್ಕಿದ್ದ ದೇಶವು ಏಕೆ ಅವರ “ವಾಗ್ದಾನದ ದೇಶ” ವಾಗಿತ್ತು ಎಂಬುದನ್ನು ವಿವರಿಸಲು (17:8), ಇಸ್ರಾಯೇಲರಿಗೆ ಸಂಭವಿಸಿದ ಎಲ್ಲದರ ಮೇಲಿರುವ ದೇವರ ಸಾರ್ವಭೌಮತ್ವವನ್ನು ಮತ್ತು ಐಗುಪ್ತದಲ್ಲಿನ ಅವರ ದಾಸತ್ವವು ಆಕಸ್ಮಿಕವಲ್ಲ ಆದರೆ ಅದು ದೇವರ ಬೃಹತ್ ಯೋಜನೆಯ ಒಂದು ಭಾಗವಾಗಿದೆ ಎಂದು ತೋರಿಸಲು (15:13-16, 50:20), ಲೋಕವನ್ನು ಸೃಷ್ಟಿಸಿದ ಅದೇ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನು ದೇವರು ಆಗಿದ್ದಾನೆ ಎಂದು ತೋರಿಸಲು (3: 15-16). ಇಸ್ರಾಯೇಲರ ದೇವರು ಅನೇಕ ದೇವರುಗಳಲ್ಲಿ ಒಬ್ಬ ದೇವರಲ್ಲ, ಆದರೆ ಭೂಮ್ಯಾಕಾಶಗಳ ಪರಮ ಸೃಷ್ಟಿಕರ್ತನಾಗಿದ್ದಾನೆ.
ಮುಖ್ಯಾಂಶ
ಆರಂಭಗಳು
ಪರಿವಿಡಿ
1. ಸೃಷ್ಟಿ — 1:1-2:25
2. ಮನುಷ್ಯನ ಪಾಪ — 3:1-24
3. ಆದಾಮನ ಸಂತತಿ — 4:1-6:8
4. ನೋಹನ ಸಂತತಿ — 6:9-11:32
5. ಅಬ್ರಹಾಮನ ಚರಿತ್ರೆ — 12:1-25:18
7. ಇಸಾಕ ಮತ್ತು ಅವನ ಮಕ್ಕಳ ಚರಿತ್ರೆ — 25:19-36:43
8. ಯೋಸೇಫನ ಸಂತತಿ — 37:1-50:26